ಮಾಹೇಶ್ವರನ ಶರಣಸ್ಥಲ - ನಿರಹಂಕಾರ
ಎಲ್ಲಿ ಹೊಕ್ಕಲ್ಲಿ ನಿನ್ನ ವಿಕಾರವ ಮಾಣೆ: ಗರುವತನವೆ?
ದಾಸನ ವಸ್ತ್ರವನುಡುವುದೊಂದು ಗರುವತನವೆ!
ಸಿರಿಯಾಳನ ಮಗನ ಬೇಡುವುದೊಂದು ಗರುವತನವೆ!
ಕೋಡಗವ ಹುಲ್ಲಲಿ ಮುಸುಕಿದಂತೆ
ಕೂಡಲಸಂಗಮದೇವಾ, ನಿಮ್ಮ ಪರಿ!
Transliteration Elli hokkalli ninna vikārava māṇe: Garuvatanave?
Dāsana vastravanuḍuvudondu garuvatanave!
Siriyāḷana magana bēḍuvudondu garuvatanave!
Kōḍagava hullali musukidante
kūḍalasaṅgamadēvā, nim'ma pari!
Manuscript
English Translation 2 Wherever you go,
You still indulge your pranks:
Is this your sense of power?
Is it one show of pride
To wear a cloth of Dāsa's?
Is it one, to ask foe Siriyāḷa's son?
Your way, O Kūḍala Saṅgama Lord,
Is like a monkey's, hiding in the hay!
Translated by: L M A Menezes, S M Angadi
Hindi Translation कहीं जाने पर भी तुम अपना विकार नहीं छोड़ते ।
यह बडप्पन है?
दास का वस्त्र पहनना बडप्पन है?
सिरियाळ के पुत्र को माँगना बडप्पन है?
बल्लाळ की पत्नी को माँगना बडप्पन है?
बंदर को घास में छिपाने की भाँति है
कूडलसंगमदेव, तव रीति ॥
Translated by: Banakara K Gowdappa
Telugu Translation ఎక్కడికి పోయినా, నీ వికారము నిన్ను విడదురా!
ఏటి పెద్దఱికమో! దాసునికోక చుట్టట పెద్దఱికమే?
సిరియాళుని కొడుకు నడుగుట పెద్దఱికమే?
మర్కటమును గడ్డిచే గప్పినట్లుగా నీ చర్య సంగా!
Translated by: Dr. Badala Ramaiah
Tamil Translation எங்கு சென்றாலும் உன் மாறுபட்ட
தன்மையை விடாய் விடாய் பெருந்தன்மையோ?
தாசனின் உடையைக் கிழித்தது பெருந்தன்மையோ?
சிறுத்தொண்டனின் மகனை வேண்டியது பெருந்தன்மையோ?
வல்லாளனின் மனைவியை வேண்டியது பெருந்தன்மையோ?
புல்லில் குரங்கை மறைத்து வைப்பதனையதாம்
கூடல சங்கம தேவனே, உம் நிலை.
Translated by: Smt. Kalyani Venkataraman, Chennai
Marathi Translation
जेथे जाता तेथे तव मनाचे विकार दाखविता, हा कसला मोठेपणा आहे?
दासिमय्याचे वस्त्र मागितले, हा कसला मोठेपणा ?
सिरियाळाच्या मुलास मागितले, हा कसला मोठेपणा ?
बल्लाळाच्या वधूस मागितले, हा कसला मोठेपणा?
माकड गवतात लपवल्या प्रमाणे चंचलता आहे.
तुमचा स्वभाव आहे कूडलसंगमदेवा.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಶಿವನು ಕಣ್ಣಿಗೆ ಕಾಣುವುದಿಲ್ಲವೆಂಬುದೊಂದು ಸುಳ್ಳುಸುದ್ದಿ. ಭಕ್ತವತ್ಸಲನಾದ ಅವನಿಗೆ ತನ್ನ ಮಕ್ಕಳು ಕಣ್ಣಿಗೆ ಕಾಣಿಸಿಕೊಂಡು–ಅವರ ಕಣ್ಣಲ್ಲಿ ಉಕ್ಕಿದ ಹರ್ಷವನ್ನು ಅನುಭವಿಸಿದಲ್ಲದೆ ಗಿರಿಬಾಲೆಯ ಪ್ರೇಮಸ್ಪರ್ಶವೂ ಸುಖಿಸುವುದಿಲ್ಲ. ಆದ್ದರಿಂದಲೇ ಅವನು ವ್ಯಾಜಾಂತರದಿಂದ ವೇಷಾಂತರದಲ್ಲಿ ಭಕ್ತರ ಬಳಿಯೇ ಸುಳಿಯುತ್ತಿರುವನು. ಆಗ ಆ ಶಿವನನ್ನು ಶಿವಬೀಜಕ್ಕೆ ಹುಟ್ಟಿದ ಶಿವಭಕ್ತರು ಗುರುತಿಸುವುದು ಕಷ್ಟವೇನಲ್ಲ.
ಯಾವುದು ಕೊಡಲಾಗುವುದಿಲ್ಲವೋ ಅದನ್ನೇ ಬೇಡುವ ಕಾಡುವ ಕಪಟನಾಟಕಸೂತ್ರಧಾರಿಯವನು. ಆ ಮೂಲಕ ಭಕ್ತನಿಗೆ ಕಸಿವಿಸಿಯಾದರೆ ಮುಸಿಮುಸಿ ನಗುವುದು ಆ ಶ್ಮಶಾನವಾಸಿಯ ಅಭಿರುಚಿ.
ಒಂದು ಸಲ ದೇವರದಾಸಿಮಯ್ಯ ಸಂತೆಯಲ್ಲಿದ್ದಾಗ ಅವನ ಉಟ್ಟ ಬಟ್ಟೆಯನ್ನೇ ಸೆಳೆದುಕೊಂಡ. ಒಂದು ಸಲ ಮಗನನ್ನೇ ಕೊಂದು ಅಡುಗೆಮಾಡಿ ಬಡಿಸೆಂದು ಸಿರಿಯಾಳನನ್ನು ಗಾಬರಿಗೊಳಿಸಿದ. ಒಂದು ಸಲ ಬಲ್ಲಾಳನ ಮುಂದೆ ನಿಂತು ಅವನ ಹೆಂಡತಿಯನ್ನೇ ಕೇಳಿ ದಂಗುಬಡಿಸಿದ.
ಇದನ್ನೆಲ್ಲ ಕೊಟ್ಟವರು ದೊಡ್ಡ ಭಕ್ತರಾಗಬಹುದು –ಆದರೆ ದೊಡ್ಡ ದೇವರೆನಿಸಿಕೊಂಡ ಶಿವನಿಗಿದು ತರವೇ-ಎಂದು ಬಸವಣ್ಣನವರು ಶಿವನ ನಿಂದಾಸ್ತುತಿ ಮಾಡುತ್ತಿರುವರು.
ವಾಸ್ತವವಾಗಿ ಶಿವನು ದಾಸಿಮಯ್ಯ ಮುಂತಾದವರಿಂದ ಕಸಿದುಕೊಂಡುದು ವಿತ್ತೇಷಣ ಪುತ್ರೇಷಣ ದಾರೇಷಣವೆಂಬ ವ್ಯಾಮೋಹತ್ರಯಗಳನ್ನೇ !
ಹೀಗೆ ಶಿವನು ಏನಾದರೊಂದು ಗಲಿಬಿಲಿ ಮೂಲಕವೇ ಭಕ್ತರಿಗೆ ಗೋಚರಿಸುತ್ತಾನೆ. ದರ್ಶನೀಯವಾಗಿ ಭಕ್ತರ ಕಣ್ಣಿಗೆ ಬೀಳದಿದ್ದರೆ ಅವನಿಗೆ ನೆಮ್ಮದಿಯಿಲ್ಲ, ಹುಲ್ಲಿನಲ್ಲಿ ಮುಚ್ಚಿಟ್ಟ ಕೋತಿ-ತನ್ನ ಮುಖ ತೋರದೆ-ಅಲ್ಲೇ ಇನ್ನೆಷ್ಟು ಹೊತ್ತು ತಾನೇ ಇದ್ದೀತು ?!
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು