ಬಸವಣ್ಣ   
  ವಚನ - 740     
 
ಎಲ್ಲಿ ಹೊಕ್ಕಲ್ಲಿ ನಿನ್ನ ವಿಕಾರವ ಮಾಣೆ: ಗರುವತನವೆ? ದಾಸನ ವಸ್ತ್ರವನುಡುವುದೊಂದು ಗರುವತನವೆ! ಸಿರಿಯಾಳನ ಮಗನ ಬೇಡುವುದೊಂದು ಗರುವತನವೆ! ಕೋಡಗವ ಹುಲ್ಲಲಿ ಮುಸುಕಿದಂತೆ ಕೂಡಲಸಂಗಮದೇವಾ, ನಿಮ್ಮ ಪರಿ!