ಬಸವಣ್ಣ   
  ವಚನ - 755     
 
ಊರ ಮುಂದೆ ಹಾಲ ಹಳ್ಳ ಹರಿಯುತ್ತಿರಲು, ಓರೆಯಾವಿನ ಬೆನ್ನಲ್ಲಿ ಹರಿಯದಲೇಕಯ್ಯಾ? ಲಜ್ಜೆಗೆಡಲೇಕೆ? ನಾಣುಗೆಡಲೇಕೆ? ಕೂಡಲಸಂಗಮದೇವಯ್ಯನ್ನುಳ್ಳನ್ನಕ್ಕ ಬಿಜ್ಜಳನ ಭಂಡಾರವೆನಗೇಕಯ್ಯಾ?