ಬಸವಣ್ಣ   
  ವಚನ - 760     
 
ಗುರುಭಕ್ತಿಯ ಮಾಡಬಹುದಲ್ಲದೆ, ಲಿಂಗಭಕ್ತಿಯ ಮಾಡಬಾರದು. ಲಿಂಗಭಕ್ತಿಯ ಮಾಡಬಹುದಲ್ಲದೆ, ಜಂಗಮಭಕ್ತಿಯ ಮಾಡಬಾರದು. ಜಂಗಮಭಕ್ತಿಯ ಮಾಡಬಹುದಲ್ಲದೆ, ಸಮಯಭಕ್ತಿಯ ಮಾಡಬಾರದು. ಸಮಯಭಕ್ತಿಯ ಮಾಡಬಹುದಲ್ಲದೆ, ಸಮಯ ಸಂತೋಷವ ಮಾಡಬಾರದು. ಇವೆಲ್ಲವ ಮಾಡಬಹುದಲ್ಲದೆ ತನ್ನ ತಾನರಿಯಬಾರದು ! ತನ್ನ ತಾನರಿದೆನೆಂಬ ಅಹಂಕಾರವುಳ್ಳರೆ ನಿಮ್ಮವರಿಗೆ ದೂರ, ಎಲೆ ದೇವಾ. ಅನ್ಯಕ್ಕೆ ಆಸೆ ಮಾಡಿದೆನಾದರೆ, ನಿಮ್ಮಾಣೆ, ನಿಮ್ಮ ಪ್ರಮಥರಾಣೆ! ಕೂಡಲಸಂಗಮದೇವಾ.