ಮಾಹೇಶ್ವರನ ಐಕ್ಯಸ್ಥಲ - ನಿರ್ವಂಚನೆ
ಅಂದಂದಿನ ಹೊಂದಿಗೆಯ ಬಿಂದುಮಾತ್ರದಲಾದ
ಅಂದವ ಕೆಡಿಸಲರಿಯದ ಅಂಧಕರ ನೋಡಾ.
ಸಮರಸವಿಲ್ಲದೆ ನೆರಹಿ ಮಾಡಿ, ಭಕ್ತರಾದರೆಂಬವರನೇನೆಂಬೆ?
ಆಚಾರವಂಚಕರ ಎನಗೆ ತೋರದಿರು,
ಕೂಡಲಸಂಗಮದೇವಾ, ನಿಮ್ಮ ಧರ್ಮ!
Transliteration Andandina hondigeya bindumātrada
andava keḍisalariyada andhakara nōḍā.
Samarasavillade nerahi māḍi, bhaktarādarembavaranēnembe?
Ācāravan̄cakara enage tōradiru,
kūḍalasaṅgamadēvā, nim'ma dharma!
Manuscript
English Translation 2 Look at the blind ones who cannot
Destroy the form that grows
From just a drop
Of each day's union.
What shall I say of them
Who claim to be devotees,
Merely because they meet and pray
Without surrendering their hearts?
I pray Thee, Kūḍala Saṅgama Lord,
Let me not be
Such fraudlent worshipper!
Translated by: L M A Menezes, S M Angadi
Hindi Translation उन अंधों को देखो जो नित्य के संयोग के
बिंदु मात्र से उत्पन्न सौंदर्य का नाश करना नहीं जानते ।
मैं उन्हें क्या कहूँ जो समरसता के बिना
सम्मिलित भत्कि करके, भक्त मानते हैं?
कूडलसंगमदेव कृपया ऐसे आचार भ्रष्टों को
मुझे मत दिखाओ, दया करो ॥
Translated by: Banakara K Gowdappa
Telugu Translation అప్పడప్పుడే చేరి అంద మణుమాత్రమేని;
చెఱపలేని అంథుల చూడమా! సమరసము లేక
కలసిచేసి భక్తులమైతిమను వారినేమందు?
సంగా! కరుణించి ఆచార వంచకుల నాకు చూపింపకయ్యా!
Translated by: Dr. Badala Ramaiah
Tamil Translation நாள்தோறும் உடலியல்பை, புலனின்பத்தை
களைவதை அறியாத குருடரைக் காணாய்
சமரச உணர்வின்றி, இணைந்து பக்தர்கள்
ஆனோம் என்போரை என்னென்பேன் ஐயனே?
நெறியற்றோரை எனக்குக் காட்டாய்
கூடல சங்கமதேவனே, உம் அறம்.
Translated by: Smt. Kalyani Venkataraman, Chennai
Marathi Translation
नश्वर संसाराच्या मायेचा पडदा दूर
करणे न जाणणारे आंधळे पहा.
समरसताहीन भक्ती करुन,
भक्त म्हणून घेणाऱ्याला काय म्हणू ?
आचार वंचकांना मला दाखवू नये.
हा तुमचा धर्म कूडलसंगमदेवा !
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಹೆಂಡಿರ ಗಂಡರ ದೈನಂದಿನ ಸ್ವಚ್ಛಂದದಿಂದ ಹುಟ್ಟಿದ ಈ ದೇಹದ ತಾಮಸರಾಜಸಗಣಗಳನ್ನು ಹದ್ದುಬಸ್ತಿನಲ್ಲಿಡದೆ –ಅದೇ ರಚ್ಚೆಯಲ್ಲಿ ಕುರುಡಾಗಿ ತಡವರಿಸುತ್ತಿರುವ ಜನ ಭಕ್ತರಾಗುವುದು ಸುಲಭವಲ್ಲ, ದೈಹಿಕವಾದ ಜಾತಿವಿಜಾತಿಗಳ ಜಂಜಡದಲ್ಲೇ ಬಿದ್ದು ಒದ್ದಾಡುತ್ತಿರುವ ಜನ ತಾವೆಲ್ಲರೂ ಒಂದೆಂಬ ಸಮರಸವನ್ನು ಸ್ಥಾಪಿಸಿಕೊಳ್ಳದೆ –ಗುರುಲಿಂಗಜಂಗಮವೆಂದು ಪಾದೋದಕ ಪ್ರಸಾದವೆಂದು ಏನು ಮಾಡಿದರೇನು ಬಂತು ?ಜನ್ಮದಿಂದ ಜಾತಿಯನ್ನು ಮೇಲು ಕೀಳೆಂದು ನಿಶ್ಚಯಿಸಿ ಭಕ್ತಜನರಲ್ಲಿ ವಿರಸವನ್ನು ಬಿತ್ತುವ ಜನ ಆಚಾರವಂತರಲ್ಲ –ಆಚಾರವಂಚಕರು. ಅಂಥವರು ನನ್ನ ಅನುಯಾಯಿಗಳಲ್ಲವೆನ್ನುತ್ತಿರುವರು ಬಸವಣ್ಣನವರು.
ಅಂಗದ ಮೇಲೆ ಲಿಂಗ ಕಟ್ಟಿದ್ದು –ಆ ಅಂಗ ಲಿಂಗವಾಯಿತ್ತೆನ್ನಲು. ಲಿಂಗಧಾರಿಯಾದ ಮೇಲೂ ಇದು ಬೆಸ್ತನ ಅಂಗ, ಇದು ಬೇಡನ ಅಂಗ ಎಂದು ಮುಂತಾಗಿ ಭಿನ್ನತೆಯೇರ್ಪಟ್ಟರೆ ಅದು ಲಿಂಗವಂತಧರ್ಮದ ಸುವ್ಯವಸ್ಥೆಯ ಲಕ್ಷಣವಲ್ಲ-ಎಂಬುದು ಬಸವಣ್ಣನವರ ಅಭಿಪ್ರಾಯ.
ಕಟ್ಟಿದ ಲಿಂಗದೊಡನೆ ಹುಟ್ಟಿದ ಅಂಗಕ್ಕೆ ಸಮರಸ ಸಮಗೌರವ ಬರದ ಮೇಲೆ-ಅಗ್ಘವಣಿ ಹೂವು ಪತ್ರೆ ಗಂಧ ಕರ್ಪೂರಗಳನ್ನು ಪುಟ್ಟಿ ಬಟ್ಟಲು ಭರಣಿ ತಟ್ಟೆಗಳಲ್ಲಿ ತುಂಬಿದ್ದು ಸುರಿದಿದ್ದು ಬಳಿದಿದ್ದು ಬೆಳಗಿದ್ದು ಯಾವ ಪುರುಷಾರ್ಥಕ್ಕೆ?
ಆದರೂ ಲಿಂಗವನ್ನು ಕಟ್ಟಿದೆವೆಂದು ಪೂಜಿಸಿದೆವೆಂದು ಸಮಾಜದಲ್ಲಿ ಮೆರೆಯುವ ಬಣ್ಣಬಣ್ಣದ ಭಕ್ತರನ್ನು ಬಸವಣ್ಣನವರು ಆಚಾರವಂಚಕರೆನ್ನುತ್ತಿರುವುದು ಸರಿಯೆ ! ಅಷ್ಟೇ ಅಲ್ಲ –ಅವರು ಆತ್ಮವಂಚಕರು, ಲೋಕವಂಚಕರು -ಭಕ್ತರೆಂದಿಗೂ ಅಲ್ಲ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು