ಬಸವಣ್ಣ   
  ವಚನ - 765     
 
ಆಸೆ ರೋಷ ಹರುಷಾದಿಗಳೆಂಬ ಕರಣೇಂದ್ರಿಯವ ಮುಟ್ಟಲೀಯದೆ, ಆಚಾರವ ಶಿವಾಚಾರವ ಮಾಡುವೆ; ಭಯಭಕ್ತಿಯಿಂದ ತೋರುವೆ, ಮನದಲ್ಲಿ ವಂಚನೆಯಿಲ್ಲದೆ; ಭಾವಶುದ್ಧ ಪೂಜೆಯ ಮಾಡುವೆ, ಎನ್ನ ಪ್ರಾಣಶಕ್ತಿಯಿಂದ ಕೂಡಲಸಂಗಮದೇವರ.