•  
  •  
  •  
  •  
Index   ವಚನ - 772    Search  
 
ಪ್ರಸಾದಿಯ ಜ್ಞಾನಿಸ್ಥಲ - ಲಿಂಗನಿಷ್ಠೆ
ಹುತ್ತದ ಮೇಲಣ ರಜ್ಜು ಮುಟ್ಟಿದರೆಯೂ ಸಾವರು ಶಂಕಿತರಾದವರು. ಸರ್ಪದಷ್ಟವಾದರೆಯೂ ಸಾಯರು ನಿಶ್ಯಂಕಿತರಾದವರು: ಕೂಡಲಸಂಗಮದೇವಯ್ಯಾ, ಶಂಕಿತಂಗೆ ಪ್ರಸಾದ ಸಿಂಗಿ ಕಾಳಕೂಟ ವಿಷವು!
Transliteration Huttada mēlaṇa rajju muṭṭidareyū savāraru śaṅkitarādavaru. Darpadaṣṭavādareyū sāyaru niśyaṅkitarādavaru: Kūḍalasaṅgamadēvayya, śaṅkitaṅge prasāda siṅgi kāḷakūṭaviṣavu!
Manuscript
English Translation 2 The sceptics die even if they touch a rope Upon an anthill; those who do not doubt Do not die even when bitten by a snake! O Kūḍala Saṅgama Lord, Grace is a poison to the Sceptic, ay, A deadly bane! Translated by: L M A Menezes, S M Angadi
Hindi Translation वल्मीक के ऊपर की रस्सी स्पर्श करने पर भी मरते हैं संशयी, सर्प दर्शन से भी नहीं मरते निस्संशयी। कूडलसंगमदेव, शंकित को प्रसाद विष है, कालकूट विष है॥ Translated by: Banakara K Gowdappa
Telugu Translation పుట్టపై గల పురిముట్ట శంకితుడప్పుడే చచ్చు; సర్పదష్టుడయ్యు చావడు నిశ్శంకితుడు; దేవా! శంకితునకు ప్రసాదము సింగి-కాలకూట విషము Translated by: Dr. Badala Ramaiah
Tamil Translation புற்றின் மேலுள்ள கயிற்றைத் தீண்டின் ஐயமுள்ளோர் மடிவர் ஐயனே உண்மையிலேயே அரவம் இருப்பினும் ஐயமற்றோர் மடியார் ஐயனே கூடல சங்கமதேவனே ஐயமுள்ளோருக்கு காளகூட நஞ்சு பிரசாதம் ஐயனே. Translated by: Smt. Kalyani Venkataraman, Chennai
Marathi Translation वारुळावरील दोरीला स्पर्श केल्याने मरतात संशयीलोक. सर्पदंशाने मरत नाहीत निःसंशयी लोक. कूडलसंगमदेवा, संशयी व्यक्तीला प्रसादसेवन कालकूट विषासम आहे. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಪ್ರಸಾದವನ್ನು ಕೊಂಬಾಗ ಇದರಿಂದ ನನ್ನಂಥವನಿಗೇನು ಒಳ್ಳೆಯದಾದೀತೆಂದು ಸಂಶಯಿಸುವುದು ಬೇಡ. ಈ ವಿಧವಾದ ಸಂಶಯದಲ್ಲಿ (ತಿರಸ್ಕಾರಭಾವಕ್ಕಿಂತ) ಭಯಾಂಶವೇ ಜಾಸ್ತಿಯಾಗಿರುವುದರಿಂದ –ಆ ಭಯದ ಫಲವಾಗಿ ಹೃದಯ ತಲ್ಲಣಗೊಂಡು –ಮನ ದುರ್ಬಲವಾಗುತ್ತದೆ –ಆಗ ಭಯಾನಕ ಪರಿಣಾಮಗಳಿಗೆ ಆತ್ಮ ಬಲಿಬೀಳುತ್ತದೆ. ಹುತ್ತದ ಮೇಲೆ ಬಿದ್ದಿರುವ ಒಂದು ಹಗ್ಗ ಸೋಕಿ ಹಾವೆಂದು ಹೌಹಾರಿದವನು ಸಾಯುವುದು ಇದಕ್ಕೊಂದು ಉತ್ತಮ ನಿದರ್ಶನ. ಆದ್ದರಿಂದ ನಂಬಿ ಬಂದು ಶರಣಧರ್ಮಕ್ಕೆ ಸೇರಿದ ಮೇಲೆ ಆ ನಂಬಿಕೆಯ ಸಾಹಸದಿಂದಲೇ ಗುರು-ಲಿಂಗ-ಜಂಗಮ-ಆಚಾರ-ಪ್ರಸಾದವೆಂಬ ಗುಹಾಂತರ್ದೇವಾಲಯಗಳನ್ನು ನಿಶ್ಯಂಕಿತನಾಗಿ ಪ್ರವೇಶಿಸಬೇಕು –ಆಗ ಮಾತ್ರ ಅನಿಮಿಷಗುರುದರ್ಶನ, ಜ್ಯೋತಿರ್ಲಿಂಗ ಸಾನ್ನಿಧ್ಯ, ಜಂಗಮಶಕ್ತಿ ಸಂಕ್ರಮಣ, ಆಚಾರ ತೇಜಃ ಪರಿಪ್ಲಾವನ, ಪ್ರಸಾದಸಿದ್ಧಿ ಲಭಿಸುವುದು. ಹಾವೇ ಕಚ್ಚಿದರೂ (ವಿಷವೇರದಿದ್ದಾಗ) ಭಯಪಡದವರು ಬದುಕಿಕೊಳ್ಳುವುದು ಇದಕ್ಕೊಂದು ಉತ್ತಮ ನಿದರ್ಶನ. ಬಸವಣ್ಣನವರ ಶಿವಧರ್ಮಕ್ಕೆ ಬಂದು ಸೇರಿದ ಮುಗ್ಧ ಜನಸಾಮಾನ್ಯರಿಗೆ ಈ ಮಾತು ಚೆನ್ನಾಗಿಯೇ ಅನ್ವಯಿಸುತ್ತದೆ. ಹಚ್ಚಿದ ದೀಪವನ್ನು ಗಾಳಿ ಬೀಸಿದಾಗಲೆಲ್ಲಾ ಕೈಯಡ್ಡಮಾಡಿ, ಸೆರಗು ಮರೆಮಾಡಿ ಎದೆಗೊಡ್ಡಿಕೊಂಡು ಆ ಜ್ಯೋತಿಯನ್ನು ಸಂರಕ್ಷಿಸಿಕೊಳ್ಳುವಂತೆ –ಧರ್ಮಶ್ರದ್ಧೆಯನ್ನು ಅವಿಚಾರನಾಸ್ತಿಕರ ಗಾಳಿಯ ಮಾತುಗಳಿಂದ ಎಲ್ಲಂದರಲ್ಲೂ ರಕ್ಷಿಸಿಕೊಳ್ಳಬೇಕು. “ಶ್ರದ್ಧಾವಾನ್ ಲಭತೇ ಜ್ಞಾನಂ ತತ್ಪರಃ ಸಂಯತೇಂದ್ರಿಯಃ | ಜ್ಞಾನಂ ಲಬ್ದ್ವಾ ಪರಾಂ ಶಾಂತಿಮಚಿರೇಣಾಧಿಗಚ್ಛತಿ || 39 || ಅಜ್ಞಶ್ಚಾಶ್ರದ್ಧಧಾನಶ್ಚ ಸಂಶಯಾತ್ಮಾ ವಿನಶ್ಯತಿ | ನಾಯಂ ಲೋಕೋಸ್ತಿ ನ ಪರೋ ನ ಸುಖಂ ಸಂಶಯಾತ್ಮನಃ || 40 || (ಭಗವದ್ಗೀತೆ –ಅಧ್ಯಾಯ ನಾಲ್ಕು) ತತ್ಪರನೂ ಜಿತೇಂದ್ರಿಯನೂ ಆದ ಶ್ರದ್ಧಾವಂತನಿಗೆ ಮಾತ್ರ ಜ್ಞಾನ ಲಭಿಸುವುದು –ಜ್ಞಾನಿಯಾದವನಿಗೆ ತಡವಿಲ್ಲದೆ ಪರಮ ಶಾಂತಿಯು ಮೈಮನಗಳಲ್ಲಿ ನಿಬಿಡವಾಗಿ ತುಂಬಿ ನಿಲ್ಲುವುದು. ಈ ಶಾಂತಿ, ಜ್ಞಾನ, ಶ್ರದ್ಧೆಯಿಲ್ಲದ ಸಂಶಯವಂತನು ಹಾಳಾಗುತ್ತಾನೆ. ಅವನಿಗೆ ಈ ಲೋಕಸುಖವೂ ಇಲ್ಲ, ಪರ(ಮ) ಸುಖವೂ ಇಲ್ಲ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು