ಪ್ರಸಾದಿಯ ಜ್ಞಾನಿಸ್ಥಲ - ಶರೀರ
ಒಲ್ಲೆನೆಂಬುದು ವೈರಾಗ್ಯ: ಒಲಿವೆನೆಂಬುದು ಕಾಯಗುಣ.
ಆವ ಪದಾರ್ಥವಾದರೇನು? ತಾನಿದ್ದೆಡೆಗೆ ಬಂದುದ
ಲಿಂಗಾರ್ಪಿತವ ಮಾಡಿ ಭೋಗಿಸುವುದೆ ಆಚಾರ,
ಕೂಡಲಸಂಗಮದೇವನನೊಲಿಸ ಬಂದ
ಪ್ರಸಾದಕಾಯವ ಕೆಡಿಸಲಾಗದು.
Transliteration Ollenembudu vairāgya: Olivenembudu kāyaguṇa.
Āva padārthavādarēnu? Tāniddeḍege banduda
liṅgārpitava māḍi bhōgisuvudu ācāra,
kūḍalasaṅgamadēvananolisa banda
prasādakāyava keḍisalāgadu.
Manuscript
English Translation 2 Renunciation is to say
'I do not want'; to say 'I want'
Is body's foible.
What matters where a thing may be?
To offer Liṅga what comes wherever you are
And to enjoy it, that is discipline.
The consecrated body, come
To gratify Lord Kūḍala Saṅgama ,
Must not suffer
Translated by: L M A Menezes, S M Angadi
Hindi Translation नहीं चाहिए कहना वैराग्य है,
‘चाहिए’कहना शरीर धर्म है,
स्वस्थान पर प्राप्त कोई वस्तु हो
उसे लिंगार्पित कर भोगना आचार है ।
कूडलसंगमदेव के प्रसन्नार्थ प्राप्त
प्रसाद तन दूषित नहीं करना चाहिए ॥
Translated by: Banakara K Gowdappa
Telugu Translation వలదనుట వైరాగ్యము; వలయుననుట కాయగుణము
దక్కిన యే పదార్ధ మైన నేమి? శివార్పితముచేసి
భోగించుటే ఆచారము; దేవుడు మెచ్చవచ్చిన
ప్రసాదకాయము చెఱపరాదు
Translated by: Dr. Badala Ramaiah
Tamil Translation விரும்பேன் என்பது வைராக்கியம்
விரும்பி ஒட்டிக் கொள்வது உடலியல்பு
எப்பொருளாக இருப்பிலென்ன? தான்
உள்ள இடத்திற்கு வந்ததை, இலிங்கத்திற்கு
அர்ப்பித்து உண்பதே நன்னெறியாம்
கூடல சங்கமதேவன் அருளிய
பிரசாத உடலை கெடுக்கலாகாது.
Translated by: Smt. Kalyani Venkataraman, Chennai
Marathi Translation
नको म्हणणे हे वैराग्य, पाहिजे म्हणणे देहधर्म,
कोणताही प्रसाद असला तरी आपणास सहजप्राप्त.
पदार्थ लिंगार्पित करुन उपभोगणे हा आचार.
कूडलसंगमदेवाला प्रसन्न करुन आलेली
प्रसादकाया (देह) नष्ट करु नये.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ತೀವ್ರವೈರಾಗ್ಯವಾಗಲಿ -ಗಾಢಸಂಸಾರವ್ಯಾಮೋಹವಾಗಲಿ ತ್ಯಾಜ್ಯ. ದೇವರು ಕೊಟ್ಟುದನ್ನು ಬೇಡವೆನ್ನದೆ, ಇಲ್ಲದ್ದನ್ನು ಕನವರಿಸದೆ ಶಿವಾರ್ಪಿತಭಾವದಿಂದ ಜೀವನರಥವನ್ನು ನಡೆಸುವುದೇ ಆಚಾರವೆಂದು ತಿಳಿಯಬೇಕು.
ಈ ದೇಹದ ಮೂಲವಿರುವುದು ದಿವ್ಯದಲ್ಲಿ –ಆ ದಿವ್ಯದ ಅನ್ವೇಷಣೆಯಲ್ಲಿ ದೇಹವನ್ನು ತೊಡಗಿಸಬೇಕೇ ಹೊರತು –ವೈರಾಗ್ಯವೆಂದು ವ್ಯಾಮೋಹವೆಂದು ದುರ್ಗಮದಲ್ಲಿ, ಕರ್ದಮದಲ್ಲಿ ತೊಳಲಿಸಿ ಅದರ ಘನತೆಯನ್ನು ನಗೆಗೀಡುಮಾಡಬಾರದು.
ದೇಹವನ್ನು ತೃಣೀಕರಿಸುವುದೊಂದು ತಪ್ಪಾದರೆ –ಮಿತಿಮೀರಿ ಭವ್ಯೀಕರಿಸುವುದೂ ಅಷ್ಟೇ ದೊಡ್ಡ ತಪ್ಪು –ಈ ಎರಡೂ ಮಾರ್ಗದಿಂದ ನೈಜತೆ ಮಾಯವಾಗುತ್ತದೆ. ದೇಹದಿಂದ ಸಾಧಿಸಬೇಕಾದ್ದು ಸಮಧಾತುವಾಗಿರುವುದನ್ನು –ಅದೇ ಪರಮಸುಖ.
ಬಸವಣ್ಣನವರು ಸಂನ್ಯಾಸಾಶ್ರಮವನ್ನು ಕಡ್ಡಾಯ ಮಾಡಲಿಲ್ಲವೆಂಬುದಷ್ಟೇ ಈ ವಚನದ ಅಭಿಪ್ರಾಯ -ಸಂನ್ಯಾಸಾಶ್ರಮ ತ್ಯಾಜ್ಯವೆಂದಲ್ಲ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು