ಬಸವಣ್ಣ   
  ವಚನ - 775     
 
ಒಲ್ಲೆನೆಂಬುದು ವೈರಾಗ್ಯ: ಒಲಿವೆನೆಂಬುದು ಕಾಯಗುಣ. ಆವ ಪದಾರ್ಥವಾದರೇನು? ತಾನಿದ್ದೆಡೆಗೆ ಬಂದುದ ಲಿಂಗಾರ್ಪಿತವ ಮಾಡಿ ಭೋಗಿಸುವುದೆ ಆಚಾರ, ಕೂಡಲಸಂಗಮದೇವನನೊಲಿಸ ಬಂದ ಪ್ರಸಾದಕಾಯವ ಕೆಡಿಸಲಾಗದು.