ಬಸವಣ್ಣ   
  ವಚನ - 781     
 
ಕಿವಿಯ ಸೂತಕ ಹೋಯಿತ್ತು, ಸದ್ಗುರು ವಚನದಿಂದೆ. ಕಣ್ಗಳ ಸೂತಕ ಹೋಯಿತ್ತು, ಸದ್ಭಕ್ತರ ಕಂಡೆನಾಗಿ. ಕಾಯದ ಸೂತಕ ಹೋಯಿತ್ತು, ನಿಮ್ಮ ಚರಣವ ಮುಟ್ಟಿದೆನಾಗಿ. ಬಾಯ ಸೂತಕ ಹೋಯಿತ್ತು, ನಿಮ್ಮೊಕ್ಕುದ ಕೊಂಡೆನಾಗಿ. ನಾನಾ ಸೂತಕ ಹೋಯಿತ್ತು, ನಿಮ್ಮ ಶರಣರನುಭಾವಿಯಾಗಿ. ಕೂಡಲಸಂಗಮದೇವಾ, ಕೇಳಯ್ಯಾ, ಎನ್ನ ಮನದ ಸೂತಕ ಹೋಯಿತ್ತು, ನೀವಿಲ್ಲದಿಲ್ಲೆಂದರಿದೆನಾಗಿ.