ಬಸವಣ್ಣ   
  ವಚನ - 782     
 
ಲಿಂಗಪ್ರಸಾದಿಗಳಲ್ಲದವರ ಸಂಗ ಭಂಗವೆಂದುದು ಗುರುವಚನ. ಲಿಂಗಪ್ರಸಾದಿಗಳಲ್ಲದವರ ಸಂಗ ಪಂಚಮಹಾಪಾತಕವೆಂದುದು ಲಿಂಗವಚನ: 'ಆಸನೇ ಶಯನೇ ಯಾನೆ| ಸಂಪರ್ಕೇ ಸಹಭೋಜನೇ ಸಂಚರಂತಿ ಮಹಾಘೋರೇ| ನರಕೇ ಕಾಲಮಕ್ಷಯಂ'|| ಇಂತೆಂದುದಾಗಿ, ಕೂಡಲಸಂಗಮದೇವಾ, ನಿಮ್ಮ ಶರಣರಿಗೆ ಶರಣೆಂದು ಶುದ್ಧನಯ್ಯಾ.