ಬಸವಣ್ಣ   
  ವಚನ - 791     
 
ತ್ರಿವಿಧ ಪ್ರಸಾದವೆಂದೆಂಬರು: ಅದೆಂತಹುದೊ? ಶುದ್ಧಪ್ರಸಾದ ಲಿಂಗದದು, ಸಿದ್ಧಪ್ರಸಾದ ಜಂಗಮದದು, ಪ್ರಸಿದ್ಧ ಪ್ರಸಾದ ಗುರುವಿನದದು, ಇಂತೀ ತ್ರಿವಿಧವೊಂದಾದವರ ತೋರಾ, ಕೂಡಲಸಂಗಮದೇವಾ.