ಬಸವಣ್ಣ   
  ವಚನ - 796     
 
ಲಿಂಗವಿಕಾರಿಗೆ ಅಂಗವಿಕಾರವೆಂಬುದಿಲ್ಲ, ಜಂಗಮವಿಕಾರಿಗೆ ಧನವಿಕಾರವೆಂಬುದಿಲ್ಲ; ಪ್ರಸಾದವಿಕಾರಿಗೆ ಮನವಿಕಾರವೆಂಬುದಿಲ್ಲ. ಇಂತೀ, ತ್ರಿವಿಧ ಗುಣವನರಿಯದಾತನು ಅಚ್ಚ ಲಿಂಗೈಕ್ಯನು, ಕೂಡಲಸಂಗಮದೇವಾ.