ಬಸವಣ್ಣ   
  ವಚನ - 802     
 
ಅಹಂಕಾರ ಮನವನಿಂಬುಗೊಂಡಲ್ಲಿ ಲಿಂಗ ತಾನೆಲ್ಲಿಬಪ್ಪುದೊ? ಅಹಂಕಾರಕ್ಕೆ ಎಡೆಗೊಡದೆ ಲಿಂಗತನುವಾಗಿರಬೇಕು. ಅಹಂಕಾರರಹಿತವಾದಲ್ಲಿ ಸನ್ನಹಿತ, ಕಾಣಾ, ಕೂಡಲಸಂಗಮದೇವ.