ಬಸವಣ್ಣ   
  ವಚನ - 832     
 
ಮಾಡುವಾತ ನಾನಲ್ಲಯ್ಯಾ, ನೀಡುವಾತ ನಾನಲ್ಲಯ್ಯಾ, ಬೇಡುವಾತ ನಾನಲ್ಲಯ್ಯಾ, ನಿಮ್ಮ ಕಾರುಣ್ಯವಲ್ಲದೆ. ಎಲೆ ದೇವಾ! ಮನೆಯ ತೊತ್ತಲಿಸಿದರೆ ಒಡತಿ ಮಾಡಿಕೊಂಬಂತೆ, ನಿನಗೆ ನೀ ಮಾಡಿಕೊ, ಕೂಡಲಸಂಗಮದೇವಾ.