ಬಸವಣ್ಣ   
  ವಚನ - 838     
 
ಆತ್ಮ ಲಿಂಗ, ಪರಮಾತ್ಮ ಜಂಗಮ; ತನು ಮಧ್ಯೆ ಪ್ರಸಾದವಾಯಿತ್ತು, ನಿಶ್ಚಿಂತ ನಿವಾಸವಾಯಿತ್ತು. ಕೂಡಲಸಂಗನ ಶರಣರ ಸಂಗದಿಂದ ನಿಶ್ಚಿಂತ ನಿವಾಸವಾಯಿತ್ತು!