•  
  •  
  •  
  •  
Index   ವಚನ - 846    Search  
 
ಪ್ರಾಣಲಿಂಗಿಯ ಶರಣಸ್ಥಲ - ಅನುಗ್ರಹ
ನೀನೊಲಿದರೆ ಒಲಿ; ಒಲಿಯದಿದ್ದರೆ ಸಮವೇದಿಸಿಕೊಳ್ಳಯ್ಯಾ; ಲಿಂಗದ ಬೆಳಗನೊಳಕೊಂಡು ಸಮವೇದಿಸಿಕೊಳ್ಳಯ್ಯಾ. ಕೂಡಲಸಂಗಮದೇವನಲ್ಲಿ ತದ್ಗತನಾದೆನಯ್ಯಾ!
Transliteration Nīnolidare oli; oliyadiddare samavēdisikoḷḷayya; liṅgada beḷaganoḷakoṇḍu samavēdisikoḷḷayyā. Kūḍalasaṅgamadēvanalli tadgatanādenayyā!
Manuscript
English Translation 2 Love me if you would love; if not Do understand me, O Lord, aright; When I imbibe the light of Liṅga , Lord, Do understand me aright; I have become, o Lord, In Lord Kūḍala Saṅgama, Part of Himself! Translated by: L M A Menezes, S M Angadi
Hindi Translation प्रसन्न हो, तो प्रसन्न होओ, नहीं तो पूर्ण रूप से मुझे जान लो । लिंग-प्रभा युक्त मुझे पूर्ण रूप से जान लो। मैं कूडलसंगमदेव में लीन हुआ ॥ Translated by: Banakara K Gowdappa
Telugu Translation మెచ్చిన మెచ్చుమ! నీవు మెచ్చకున్న సరిచేసికొనుమా! లింగప్రభ లోగొంచు సరిచేసికొనుమయ్యా కూడల సంగనిలో తద్గతు డౌదునయ్యా! Translated by: Dr. Badala Ramaiah
Tamil Translation நீ அருள்வாய் எனின் அருள் அருளாய் எனின் என் நிலையை நன்றாக உணர்வாய் இலிங்கப் பேரொளியில் உள்ளேன் நன்றாக உணர்வாய் கூடல சங்கமதேவனுடன் ஒன்றினேன் ஐயனே. Translated by: Smt. Kalyani Venkataraman, Chennai
Marathi Translation तू प्रसन्न हो, प्रसन्न झाला नाही तर मज समजून घे. लिंगप्रकाशात मज समजून घे देवा. कूडलसंगमदेवात समरस झालो देवा. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಎಲೆ ಶಿವನೆ, ಈ ಲೋಕದಲ್ಲಿ ನಾನಿರುವುದು ನಿನಗೆ ಒಲುಮೆಯಾದರೆ ಸರಿಯೆ, ಒಲ್ಲೆಯಾದರೆ -ನನ್ನನ್ನು ಹಿಂದಕ್ಕೆ ಕರೆಸಿಕೊಂಡು ನಿನ್ನಲ್ಲಿ ಐಕ್ಯಮಾಡಿಕೋ. ನನ್ನ ಅಂಗೈಯ ಲಿಂಗದ ಪ್ರಕಾಶಸಹಿತವಾಗಿ ನನ್ನನ್ನು ನಿನ್ನ ಹೃದಯಾಕಾಶದಲ್ಲಿ ಅಡಗಿಸಿಕೋ. ಕೂಡಲ ಸಂಗಮದೇವರಲ್ಲಿ ನಾನೀಗಾಗಲೇ ಬಿಡಿಸಿ ಬೇರಾಗದಂತೆ ಬೆಸೆದು ಹೋಗಿದ್ದೇನೆ. ವಿ : ಇಂಥ ವಚನಗಳನ್ನು ಷಟ್ಸ್ಥಲದಲ್ಲಿ ಒಂದು ಹಂತದ ಲಕ್ಷಣವನ್ನು ನಿರ್ವಚಿಸಲು ಬರೆದ ಶಾಸ್ತ್ರ ಬದ್ಧ ವಚನಗಳೆಂದು ಭಾವಿಸಬಾರದು. ಹಿಂದಿನ ವಚನ ಮತ್ತು ಈ ವಚನ -ಬಸವಣ್ಣನವರು ತಮ್ಮ ಈ ಲೋಕದ ಮಣಿಹ ಮುಗಿಯಿತೆನಿಸಿದ ಕೊನೆಕೊನೆಯ ಪರಿನಿರ್ವಾಣ ಕಲ್ಯಾಣದಲ್ಲಿ ಕೂಡಲ ಸಂಗಮದಲ್ಲಿ ಹಾಡಿದ ವಚನಗಳೆಂದು ಭಾವಿಸಬೇಕು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು