ಬಸವಣ್ಣ   
  ವಚನ - 854     
 
ಅಡಿಗಡಿಗೆ ಸ್ಥಾನನಿಧಿ, ಅಡಿಗಡಿಗೆ ದಿವ್ಯಕ್ಷೇತ್ರ, ಅಡಿಗಡಿಗೆ ನಿಧಿಯೂ ನಿಧಾನ, ನೋಡಾ! ಆತನ ಇರವೆ ವಾರಣಾಸಿ, ಅವಿಮುಕ್ತಿ ಕ್ಷೇತ್ರ: ಕೂಡಲಸಂಗನ ಶರಣ ಸ್ವತಂತ್ರನಾಗಿ.