ಬಸವಣ್ಣ   
  ವಚನ - 855     
 
ಧನದಲ್ಲಿ ಶುಚಿ, ಪ್ರಾಣದಲ್ಲಿ ನಿರ್ಭಯ: ಇದಾವಂಗಳವಡುವುದಯ್ಯಾ? ನಿಧಾನ ತಪ್ಪಿ ಬಂದರೆ ಒಲ್ಲೆನೆಂಬವರಿಲ್ಲ; ಪ್ರಮಾದವಶದಿಂ ಬಂದರೆ ಹುಸಿಯೆನೆಂಬವರಿಲ್ಲ. ನಿರಾಶೆ-ನಿರ್ಭಯ, ಕೂಡಲಸಂಗಮದೇವಾ, ನೀನೊಲಿದ ಶರಣಂಗಲ್ಲದಿಲ್ಲ!