ಪುಣ್ಯಪಾಪವೆಂಬುಭಯಕರ್ಮವನಾರು ಬಲ್ಲರಯ್ಯಾ ?
ಇವನಾರುಂಬರು? ಕಾಯ ತಾನುಂಬರೆ ಕಾಯ ಮಣ್ಣು;
ಜೀವ ತಾನುಂಬರೆ ಜೀವ ಬಯಲು!
ಈ ಉಭಯನಿರ್ಣಯವ ಕೂಡಲಸಂಗಮದೇವಾ,
ನಿಮ್ಮ ಶರಣ ಬಲ್ಲ.
Transliteration Puṇyapāpavembubhayakarmavanāru ballarayyā?
Ivanārumbaru? Kāya tānumbare kāya maṇṇu;
jīva tānumbare jīva bayalu!
Ī ubhayanirṇayava kūḍalasaṅgamadēvā,
nim'ma śaraṇa balla.
Manuscript
English Translation 2 Who knows the karma which derives
From sin and merit both?
Who is that tastes of them?
The body? But that body's earth!
The soul? But that is void!
Thou only know'st, Kūḍala Saṅgama Lord,
The upshot of these two!
Translated by: L M A Menezes, S M Angadi
Hindi Translation पाप-पुण्य नामक उभय कर्म कौन जानता है?
इन्हें कौन भोगता है?
शरीर भोगता है, वह मिट्टी है ;
जीव भोगता है, वह शून्य है;
ये उभय निर्णय, कूडलसंगमदेव,
तव शरण जानता है ॥
Translated by: Banakara K Gowdappa
Telugu Translation పుణ్యపాపములను భయకర్మ మెవ్వరు తెలియ గలరయ్యా?
ఎవ్వరనుభవింతురో వీనిని? దేహమనుభవించునన దేహము మన్ను!
జీవమనుభవించునన జీవము బయలు! ఈ యుభయ నిర్ణయము
సంగా నీ శరణుడొక్కడే తెలియగలడయ్యా!
Translated by: Dr. Badala Ramaiah
Tamil Translation புண்ணியம், பாவம் எனும் இருவினையை
யார் அறிவர் ஐயனே? இதனை யார் துய்ப்பர்?
உடல் ஜடம், அது மண்ணாகும், துய்க்காது
உயிர், உருவமற்ற பேரறிவு, துய்க்காது
இந்த இரு நிர்ணயத்தைக் கூடல சங்கனின்
சரணர் அறிவரன்றோ.
Translated by: Smt. Kalyani Venkataraman, Chennai
Marathi Translation
पुण्य-पापाच्या उभयकर्मीना कोण जाणतात देवा?
यांचा भोक्ता कोण आहे? देहाला भोक्ता म्हणावे तर तो जड आहे.
जीवाला भोक्ता म्हणावे तर ते शून्य आहे.
हा उभय निर्णय कूडलसंगमदेवा तुमचे शरण जाणतात.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಕರ್ಮಫಲಗಳನ್ನು ಉಣ್ಣುವುದು ದೇಹವೆಂದು ನಾಸ್ತಿಕರೂ, ಜೀವಾತ್ಮವೆಂದು ಆಸ್ತಿಕರೂ ಹೇಳುವರು. ಆದರೆ ದೇಹವೊಂದು ಜಡವಸ್ತುವಾದ್ದರಿಂದ (ಜೀವವಿಲ್ಲದೆ) ಅದು ಏನನ್ನಾದರೂ ಅನುಭವಿಸುವುದೆಂಬುದು ಅಸಂಗತ. ಇತ್ತ ಜೀವವು ನಿರ್ದೇಹ ಮತ್ತು ನಿರಿಂದ್ರಿಯವಾದ ಕೇವಲ ಒಂದು ಗಾಳಿಯಾಗಿ ಅದೂ ಏನನ್ನಾದರೂ ಅನುಭವಿಸಬಲ್ಲುದೆಂಬುದೂ ಅಸಂಗತವೇ ಆಗಿದೆ.
ಹೀಗೆಂಬಲ್ಲಿ ಕರ್ಮಫಲಗಳನ್ನು ಯಾರು ಉಣ್ಣುವರೆಂಬುದೊಂದು ಬಿಡಿಸಲಾರದ ಒಗಟೆಯಾದಾಗ –ಅದನ್ನು ಶರಣಧರ್ಮ ಬಿಡಿಸುವುದು ಈ ಮುಂದಿನಂತೆ :
ದೇಹವೆಂಬ ಜೀವವೆಂಬ ಈ ಎರಡೂ ಮಾಯೆಯಿಂದಾದ ಮಹಾಮಿಥ್ಯೆಗಳು. ಸತ್ಯವಾದ ಏಕೈಕ ಧ್ರುವವಸ್ತುವೆಂದರೆ ಶಿವನಲ್ಲದೆ ಅನ್ಯವಿಲ್ಲವೆಂಬ ಸದ್ಭಾವ ಉಂಟಾದಾಗ -ಸ್ವತಃ ಜೀವನಿಗೆ ನಾನು ದೇಹವೆಂಬ ಜೀವವೆಂಬ ಉಭಯಭಾವವೂ ತೊಲಗಿ ನಾನು ಶಿವಾಂಶಿಕನೆಂಬ ಮೂರನೇ ಕಣ್ಣು ಸ್ಫುರಿಸುವುದು. ಆಗ ಜೀವನು ಮಾಡುವ ಕಾರ್ಯಗಳೆಲ್ಲ ಗುರು ಲಿಂಗ ಜಂಗಮಕ್ಕೆ ಸಮರ್ಪಿತವಾಗಿ –ಮಾಡುವವನು ನಾನಲ್ಲ, ಅದಕ್ಕೆ ಸಾಕ್ಷಿಯೂ ನಾನಲ್ಲ –ಎಲ್ಲವನ್ನೂ ನನ್ನಿಂದ ಮಾಡಿಸುತ್ತಿರುವವನು ಶಿವನೇ ಎಂಬ ದಾಸೋಹಂಭಾವ ಸ್ಥಿರಗೊಂಡು ಆ ಮಾಡಿದ ಕರ್ಮದ ಫಲಗಳೂ ತನಗಂಟದೆ, ನಿತ್ಯ ವ್ಯವಹಾರಿಯಾದರೂ ನಿರಂಜನವಾಗಿರುವ ಪ್ರಸಾದಕಾಯ ಪ್ರಸಾದಜೀವ ಪ್ರಸಾದಕರ್ಮ ಪ್ರಸಾದಫಲ ತನಗುಂಟಾಗುವುದು. ಈ ಪ್ರಸಾದಮಯ ದಿವ್ಯ ಜೀವನಮಾರ್ಗವನ್ನು ಶಿವಶರಣರು ಮಾತ್ರ ಬಲ್ಲರು, ಮಿಕ್ಕವರು ಕರ್ಮಿಗಳು. ಅವರು ದೇಹಭಾವದಿಂದ ಜೀವಭಾವದಿಂದ ಮತ್ತು ಫಲಾಪೇಕ್ಷೆಯಿಂದ ಮಾಡಿದ ಕರ್ಮಗಳಿಗೆಲ್ಲಾ ನಿಗದಿಯಾದ ಪಾಪವೆಂಬ ಜುಲ್ಮಾನೆಯನ್ನೂ ಪುಣ್ಯವೆಂಬ ಸಂಭಾವನೆಯನ್ನೂ ಪಡೆದು –ಅವನ್ನು ಸವೆಸುವುದಕ್ಕಾಗಿ ಮತ್ತು ಸವಿಯುವುದಕ್ಕಾಗಿ ನರಕವೆಂದು ಸ್ವರ್ಗವೆಂದು, ಹುಟ್ಟುವುದೆಂದು ಸಾಯುವುದೆಂದು ಅನಂತವಾದ ಅಲೆದಾಟದಲ್ಲಿ ಪಾತಾಳದಿಂದ ವಿಯತ್ತಳದವರೆಗೆ ರೋದೋಂತವಾಗಿ ಈಚಿಕೊಂಡು ದುಃಖಿಸುತ್ತಿರುವರು.
ಭಗವದ್ಗೀತೆಯಲ್ಲಿ ಹೇಳಿರುವ ನಿಷ್ಕಾಮಕರ್ಮಯೋಗವನ್ನು ಬಹುಮಟ್ಟಿಗೆ ಹೋಲುವ ದಾಸೋಹವೇ ಈ ಎಲ್ಲ ನಿತ್ಯಸಂಸಾರಸ್ಥಿತಿಗೆ ಪರಿಹಾರವೆಂದು ಬಸವಣ್ಣನವರು ಅಭಿಪ್ರಾಯಪಡುತ್ತಿರುವಂತಿದೆ (ಮುಂದಿನ ವಚನವನ್ನು ಗಮನಿಸಿ).
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು