ಬಸವಣ್ಣ   
  ವಚನ - 880     
 
ಮಧ್ಯಪಿಂಡಂಗಳೆಲ್ಲವೂ ಶಿವನಿದ್ದೆಡೆಯನರಿಯವು; ಪೂರ್ವಪಿಂಡಂಗಳೆಲ್ಲವೂ ಶಿವನಾದ್ಯಂತವನರಿಯವು; ಕಾಲಪಿಂಡಂಗಳೆಲ್ಲವೂ ಶಿವನ ನಿಲುಗಡೆಯನರಿಯದೆ ಕಾಲಚಕ್ರದೊಳಗಾದುವೆಲ್ಲವೂ! ಸಂಶಯಪಿಂಡಂಗಳೆಲ್ಲವ ಮರೆದು ನಿಮ್ಮ ಶರಣ ಸೇವೆಯಲ್ಲಿರಿಸಯ್ಯಾ, ಕೂಡಲಸಂಗಮದೇವಾ.