ಬಸವಣ್ಣ   
  ವಚನ - 886     
 
ಹಾಲೆಂಜಲು ಪೆಯ್ಯನ; ಉದಕವೆಂಜಲು ಮತ್ಸ್ಯದ; ಪುಷ್ಪವೆಂಜಲು ತುಂಬಿಯ, ಎಂತು ಪೂಜಿಸುವೆನಯ್ಯಾ, ಶಿವ, ಶಿವಾ, ಎಂತು ಪೂಜಿಸುವೆ? ಈ ಎಂಜಲವನತಿಗಳೆವಡೆ ಎನ್ನಳವಲ್ಲ. ಬಂದುದ ಕೈಕೊ, ಕೂಡಲಸಂಗಮದೇವಾ.