ಬಸವಣ್ಣ   
  ವಚನ - 895     
 
ಪರಮಪ್ರಭುವೇ, ನೀ ಮುನಿದೆನ್ನ ಮರ್ತ್ಯಲೋಕದೊಳಗಿರಿಸಿದರೆ ಆನು ಸೈರಿಸಿದೆನಯ್ಯಾ. ಮದ, ಛಲಮದವಿದೇನಯ್ಯಾ? ದರುಶನಭ್ರಾಂತಿ ಇದೇನಯ್ಯಾ? ಕ್ರಿಯಾಕರ್ಮಸೂತಕವಿದೇನಯ್ಯಾ? 'ಯದ್ಯಪಿ ಸ್ಯಾತ್ ತ್ರಿಕಾಲಜ್ಞಃ| ತ್ರೈಲೋಕ್ಯಾಕರ್ಷಣಕ್ಷಮಃ|| ತಥಾಪಿ ಲೌಕಿಕಾಚಾರಂ| ಮನಸಾಪಿ ನ ಲಂಘಯೇತ್'|| ಇಂತೆಂಬುದ ಮೀರಿದೆನಾಗಿ, ಲಿಂಗಯ್ಯಾ ,ನಿಮ್ಮ ನಂಬಿದೆನಯ್ಯಾ! ಇನ್ನು ಕಲಿಯುಗದಲ್ಲಿ ಬಳಸಿದರೆ, ಕೂಡಲಸಂಗಮದೇವಾ, ನಿಮ್ಮ ರಾಣಿವಾಸದಾಣೆ!