ಬಸವಣ್ಣ   
  ವಚನ - 897     
 
ಭಕ್ತ, ಮಾಹೇಶ್ವರ, ಪ್ರಸಾದಿ, ಪ್ರಾಣಲಿಂಗಿ, ಶರಣನೈಕ್ಯನು ಮೆಲ್ಲಮೆಲ್ಲನೆ ಆದೆಹೆನೆಂಬನ್ನಬರ ನಾನೇನು ವಜ್ರದೇಹಿಯೆ? ನಾನೇನು ಅಮೃತವ ಸೇವಿಸಿದೆನೆ? ಆನು ಮರುಜೇವಣಿಯ ಕೊಂಡೆನೆ? ನುಡಿದ ನುಡಿಯೊಳಗೆ ಷಡುಸ್ಥಲ ಬಂದು ಎನ್ನ ಮನವನಿಂಬುಗೊಳ್ಳದಿದ್ದರೆ, ಸುಡುವೆನೀ ತನುವ, ಕೂಡಲಸಂಗಮದೇವಾ!