ಬಸವಣ್ಣ   
  ವಚನ - 904     
 
ಜಗವ ಸುತ್ತಿಪ್ಪುದು ನಿನ್ನ ಮಾಯೆಯಯ್ಯಾ: ನಿನ್ನ ಸುತ್ತಿಪ್ಪುದು ಎನ್ನ ಮನ, ನೋಡಯ್ಯಾ! ನೀನು ಜಗಕ್ಕೆ ಬಲ್ಲಿದನು: ಆನು ನಿನಗೆ ಬಲ್ಲಿದನು, ಕಂಡಯ್ಯಾ! ಕರಿಯು ಕನ್ನಡಿಯೊಳಗಡಗಿದಂತಯ್ಯಾ, ಎನ್ನೊಳಗೆ ನೀನಡಗಿದೆ, ಕೂಡಲಸಂಗಮದೇವಾ: