ಬಸವಣ್ಣ   
  ವಚನ - 913     
 
ಅಳಿಯನ ಕಂಡರೆ ನಾಚೆಂಬೆ, ಮಗಳೆ, ಅಳಿಯನ ಕಂಡರೆ ತೊಲಗೆಂಬೆ ಮಗಳೇ, ನಾಚುವರೆ ಮೊರೆಯಿಲ್ಲ, ತೊಲಗುವರೆ ನೆಲನಿಲ್ಲ! ಇಬ್ಬರಿಗೊಬ್ಬ ಗಂಡನಾದ ಬಳಿಕ ಇನ್ನೆಲ್ಲಿಯ ಮೊರೆ ಮಗಳೇ? ಕೂಡಲಸಂಗಮದೇವಯ್ಯನೆಂಬ ಗಂಡನಾದ ಬಳಿಕ ಇನ್ನೆಲ್ಲಿಯ ಮೊರೆ, ಮಗಳೇ?