•  
  •  
  •  
  •  
Index   ವಚನ - 917    Search  
 
ಶರಣನ ಐಕ್ಯಸ್ಥಲ - ಶರಣರು
ಅನಾಯಾಸದಿಂದ ಮನೆಯ ಮಾಡಿ, ನಿರಾಯಾಸದಿಂದ ಪರಮಸುಖಿ! ರೂಹಿಸುವಲ್ಲಿ ರೂಪಾಧಿಕ, ನೋಡುವಲ್ಲಿ ನೋಟ ಘನ! ಇಂತಪ್ಪ ಸಹಜಸಂಗಿಯ ನಿಲವಿನ ಪರಿ; ಉದಕದೊಳಗಣ ಬಿಂದು ಉದಯರತ್ನದಂತೆ ಕೂಡಲಸಂಗನ ಶರಣರ ನಿಲವು!!
Transliteration Anāyasadinda maneya māḍi, nirāyāsadinda paramasukhi! Rūhisuvalli rūpādhika, nōḍuvalli nōṭa ghana! Intappa sahajasaṅgiya nilavina pari; udakadoḷagaṇa bindu udayaratnadante kūḍalasaṅgana śaraṇara nilavu!!
Manuscript
English Translation 2 Having without much labour built a house, He is without much effort in supreme bliss! If you would fashion Him in form, He goes beyond all form! If you would look at Him, He goes beyond all sight! Such is the character Of one who's one with the Self-born: The glory of Kūḍala Saṅga'sŚaraṇās Is like a drop in water, or The jewel of the dawn ! Translated by: L M A Menezes, S M Angadi
Hindi Translation अनायास घर बनाकर, निरायास वह परम सुखी है । रूप भरना चाहो, तो वह अत्यंत रूपवान् है । देखने में वह महान् है । यह है सहज-संगी की स्थिति । कूडलसंगमेश के शरणों की स्थिति जलांतर्गत बिंदु या उदय-रत्न सम है ॥ Translated by: Banakara K Gowdappa
Telugu Translation అనాయాసముగ యిల్లుకటె; నిరాయాసమున పరమ సంతోషి; రూపించుటలో రూపాథికుడ; చూచుటలో చూపుఘనము సహజ సంగుని వ్యక్తిత్వ మిట్లయ్యా! ఉదకమున బిందువు ఉదయరత్నమువలె; సంగని శరణుల వ్యక్తిత్వమయ్యా! Translated by: Dr. Badala Ramaiah
Marathi Translation अनायासे घर करुन विनासायासाने परमसुखी झाला! पहायला सुंदर रुप, पाहणाऱ्या दृष्टीला श्रेष्ठ. असे सहजसंगीचे (ज्ञानी) व्यक्तीत्त्व आहे. पाण्याचा बिंदू प्रातःकालीन दवबिंदूसम चमकणारे कूडलसंगमदेवाच्या शरणाचे व्यक्तीत्त्व. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ತಪೋಪವಾಸಗಳಿಲ್ಲದೆ ಸಹಜನಿಜದಿಂದಲೇ ಈ ದೇಹವನ್ನು ಮಂದಿರ ಮಾಡಿ ಶರಣನು ಪರಮಸುಖದಲ್ಲಿರುವನು. ದೇಹ ಬೆರಸಿಯೂ ಅದ್ವಯಾನಂದದಲ್ಲಿರುವ ಅವನ ಆ ಸ್ಥಿತಿಯು ತನ್ನ ಜೀವರಸದಿಂದ ತಾನೇ ನಿರ್ಮಿಸಿದ ಅತ್ಯುತ್ತಮ ಗುಹಾಂತರ್ದೇವಾಲಯ ನಿವಾಸ. ಅದನ್ನು ಅವನು ಕೃತಕೃತ್ಯತೆಯಿಂದ ನಟ್ಟು ನೋಡಿದರೆ ಅದೇ ಅವನ ಆತ್ಮದರ್ಶನ. ಅದರ ಬೆಳುಕಲ್ಲದ ಬೆಳುಕಿನಲ್ಲಿ ಬೆಳುಕಾದ ಅವನ ಜೀವದಳಬಿಂದು ಮುಕ್ತಿಯ ಮಣಿಯಾಗಿ ಥಳಥಳಿಸುವುದು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು