ಬಸವಣ್ಣ   
  ವಚನ - 927     
 
ಜೀವಾತ್ಮ-ಅಂತರಾತ್ಮನ ಸುದ್ದಿಯ ಬೆಸಗೊಂಬರೆ ಹೇಳಿಹೆ, ಕೇಳಿ ಭೋ: ಹುಸಿಯ ಸಂಕಲೆಯಾಗಿರ್ದಲ್ಲಿ ಕಾದುಕೊಂಡಿದ್ದನೊಬ್ಬ: ಕಥೆ ಕನಸಮಾಡಿ ಹೇಳುತ್ತಿದ್ದನೊಬ್ಬ: ಪರಾತ್‌ಪರಕ್ಕೆ ಹೋಗಿ ಪರಮನ ಸುದ್ದಿಯಕೊಂಡು ಬರುತ್ತಿದ್ದನೊಬ್ಬ! ಅವರಿಬ್ಬರನೂ ಕೆಡೆಮೆಟ್ಟಿ ಹೋಹಾಗ, ಲೋಕ ನಿರ್ಬುದ್ಧಿಗೊಂಡಿತ್ತು, ಕೂಡಲಸಂಗಮದೇವಾ.