ಬಸವಣ್ಣ   
  ವಚನ - 931     
 
ಒಲೆಯಡಿಯನುರುಹಿದಡೆ ಹೊಗೆ ಗೋಳಕನಾಥನ ಕೊರಳ ಸುತ್ತಿತ್ತು; ಮಹೀತಳನ ಜಡೆ ಸೀಯಿತ್ತು, ಮರೀಚಕನ ಶಿರ ಬೆಂದಿತ್ತು; ರುದ್ರನ ಹಾವುಗೆ ಉರಿಯಿತ್ತು, ದೇವಗಣಂಗಳು ನಿವಾಟವಾದರು; ಮಡದಿಯೈಯ್ವರು ಮುಡಿಯ ಹಿಡಿದುಕೊಂಡು ಹೋದರು; ಕೂಡಲಸಂಗಮದೇವ ಭಸ್ಮಧಾರಿಯಾದ!