ಬಸವಣ್ಣ   
  ವಚನ - 941     
 
ಸತ್ತು ಹುಟ್ಟುವವನಲ್ಲ, ಸಂದೇಹಿ ಸೂತಕಿಯಲ್ಲ ಆಕಾರ ನಿರಾಕಾರನಲ್ಲ ನೋಡಯ್ಯಾ! ಕಾಯವಂಚಕನಲ್ಲ, ಜೀವವಂಚಕನಲ್ಲ, ನಿರಂತರ ಸಹಜ, ನೋಡಯ್ಯಾ! ಶಂಕೆಯಿಲ್ಲದ ಮಹಾಮಹಿಮನು, ನೋಡಯ್ಯ, ಕೂಡಲಸಂಗನ ಶರಣನುಪಮಾತೀತ ನೋಡಯ್ಯಾ!