ಬಸವಣ್ಣ   
  ವಚನ - 945     
 
ಬೆಳಗಣೊಳಗಣ ಬೆಳಗು ಮಹಾಬೆಳಗೆಂಬ ಪ್ರಸಾದದಲ್ಲೊದಗಿದ ಪ್ರಸಾದಿಯ ಪರಿಣಾಮದ ಪರಮಾನಂದವನೇನೆಂದುಪಮಿಸುವೆನಯ್ಯಾ? ಪರಮಾಶ್ರಯವೇ ತಾನಾಗಿ, ಕೂಡಲಸಂಗಮದೇವಯ್ಯ ಚೆನ್ನಬಸವಣ್ಣನೆಂಬ ಮಹಾಪ್ರಸಾದಿ ಎನ್ನ ವಾಗ್ಮನಕ್ಕಗೋಚರನಾಗಿ, ನಾನೇನೆಂಬೆನಯ್ಯಾ?