ಬಸವಣ್ಣ   
  ವಚನ - 949     
 
ಕುರುಹಿಲ್ಲ, ಕುರುಹಿಲ್ಲ ಲಿಂಗವೆಂದೆಂಬರೆ, ತೆರಹಿಲ್ಲ ತೆರಹಿಲ್ಲ ಜಂಗಮವೆಂದೆಂಬರೆ! ಇದೆ ನೋಡಾ ಶಿವಾಚಾರ, ಇದೆ ನೋಡಾ ಶಿವದೊಡಕು! 'ಆತ್ಮನಾಂ ಪ್ರಕೃತಿಃ ಸ್ವಭಾವ' ಎಂದುದಾಗಿ ಮುಟ್ಟಬಾರದ ಠಾವ ಮರೆಗೊಂಡಿರ್ಪ ಮಮಕರ್ತ ಕೂಡಲಸಂಗಮದೇವ.