ಬಸವಣ್ಣ   
  ವಚನ - 956     
 
ಸಹಸ್ರಶೀರ್ಷನಾದಿಪುರುಷನು ವೇದಪುರುಷನೊಬ್ಬ ಪುರುಷನು; ಜ್ಯೋತಿಪುರುಷನೊಬ್ಬ ಪುರುಷನು; ತ್ರಿಪಾದದೂರ್ಧ್ವ ಪುರುಷನೊಬ್ಬ ಪುರಷನು; ಉದನ್ಮುಖನೊಬ್ಬ ಪುರುಷನು, ಉದಯ ಮುಖನೊಬ್ಬ ಪುರುಷನು; ವಿರಾಟಜನನನೊಬ್ಬ ಪುರುಷನು, ವಿರಾಜ ಪುರುಷನೊಬ್ಬ ಪುರುಷನು; ಆದಿಪುರುಷನೊಬ್ಬ ಪುರುಷನು, ವಿಯತ್ ಪುರುಷನೊಬ್ಬ ಪುರುಷನು; ತದ್ವಿಯತ್ಪುರುಷಾಪುರುಷ ಪುರುಷರಿಲ್ಲದ ಪ್ರಭೆಯ ನೋಡಿರೆ: ವೇದನಾದಾತೀತ ತುರ್ಯಪರಮಾನಂದ ನಿರವಯಂ ಷಡುತ್ರಿಂಶತ್‌ ಪ್ರಭಾಪಟಲದ ಪ್ರಭೆಯ ಬೆಳಗಿದೆ ನೋಡಿರೆ: ಬೆಳಗಿನೊಳಗಣ ಮಹಾಬೆಳಗಿನ ಬೆಳಗು, ನಮ್ಮ ಕೂಡಲಸಂಗಯ್ಯ!