ಬಸವಣ್ಣ   
  ವಚನ - 963     
 
ಅಂಗದಲಳವಟ್ಟ ಲಿಂಗಕ್ಕೆ ಅಂಗವೆ ಭಾಜನ, ಪ್ರಾಣದ ಮೇಲಣ ಲಿಂಗಕ್ಕೆ ಮನವೆ ಭಾಜನ. ಅರಿವಿನ ಮೇಳಣ ಲಿಂಗಕ್ಕೆ ನಿರ್ಭಾವವೆ ಭಾಜನ ಕೂಡಲಸಂಗಮದೇವಯ್ಯ, ಪ್ರಭುದೇವರು ಆರೋಗಣೆಯ ಮಾಡುವಡೆ ಭಕ್ತಿಪರಿಯಣವಲ್ಲದೆ ಬೇರೆ ಭಾಜನವ ಕಾಣೆನು.