ಬಸವಣ್ಣ   
  ವಚನ - 990     
 
ಅಯ್ಯಾ, ನಿಮ್ಮ ಮಹಾನುಭಾವಿಗಳ ಸಂಗದಿಂದೆನ್ನ ತನು ಶುದ್ಧವಾಯಿತ್ತು, ಮನ ಶುದ್ಧವಾಯಿತ್ತು, ಧನ ಶುದ್ಧವಾಯಿತ್ತು, ಎನ್ನ ಸರ್ವಾಂಗಶುದ್ಧವಾಯಿತ್ತು, ವಾರಿಕಲ್ಲಪುತ್ಥಳಿಯನಪ್ಪಿಕೊಂಡಂತಾಯಿತ್ತು. ಕೂಡಲಸಂಗಮದೇವಾ, ನಿಮ್ಮ ಶರಣ ಪ್ರಭುದೇವರ ಕೃಪೆಯಿಂದ ಎನಗೊದಗಿದ ಘನವನೇನೆಂದುಪಮಿಸುವೆ?