ಬಸವಣ್ಣ   
  ವಚನ - 993     
 
ಅಯ್ಯಾ, ನಿಮ್ಮ ಶರಣರ ಕಂಡರೆ ಕಡುಸುಖವೆನಗಯ್ಯಾ, ಕಾಣದಿರೆ ಅವಸ್ಥೆ ನೋಡಯ್ಯಾ. ತವಕದ ಸ್ನೇಹ ದರುಶನದಲ್ಲಿ ತರಹರವಾಯಿತ್ತು, ಕೂಡಲಸಂಗಮದೇವಾ, ನಿಮ್ಮ ಶರಣರ ಶ್ರೀಪಾದವ ಕಂಡು ಧನ್ಯನಾದೆನು.