ಬಸವಣ್ಣ   
  ವಚನ - 995     
 
ಅಯ್ಯಾ, ನಿಮ್ಮ ಶರಣರ ಸಂಗವೆನಗೆ ಪರಮಸುಖವಯ್ಯಾ, ಅಯ್ಯಾ, ನಿಮ್ಮ ಶರಣರ ಅಗಲಿಕೆ ಎನ್ನ ಪ್ರಾಣವಿಯೋಗವಯ್ಯಾ, ಶಿವಶಿವಾ ಸಂತವಿಡುವೆನು, ಇನ್ನೆಂತಯ್ಯಾ, ಎನಗೇನು ಗತಿ, ಕೂಡಲಸಂಗಮದೇವಾ? ನಿಮ್ಮ ಶರಣರ ಮುನಿಸು ಎನಗೆ ಬಿಡಿಸಬಾರದ ತೊಡಕು.