ಬಸವಣ್ಣ   
  ವಚನ - 1008     
 
ಅರತುದಯ್ಯಾ ಅಂಗಗುಣ, ಒರತುದಯ್ಯಾ ಭಕ್ತಿರಸ, ಆವರಿಸಿತ್ತಯ್ಯಾ ಲಿಂಗವಂಗವನು, ಏನೆಂದರಿಯೆನಯ್ಯಾ ಲೋಕಲೌಕಿಕವ. ಲಿಂಗಭ್ರಾಂತನಾದೆನಯ್ಯಾ ಕೂಡಲಸಂಗಯ್ಯಾ, ನಿಮ್ಮ ಕರುಣವೆನ್ನನೆಡೆಗೊಂಡಿತ್ತಾಗಿ.