ಬಸವಣ್ಣ   
  ವಚನ - 1021     
 
ಅರ್ಥವುಳ್ಳವರೆಲ್ಲ ಅರಸಿಂಗಂಜುವರಯ್ಯಾ, ಭಕ್ತಿಯುಳ್ಳವರೆಲ್ಲ ಜಂಗಮಕ್ಕಂಜುವರಯ್ಯಾ, ಸೂಳೆಗೊಲಿದವರೆಲ್ಲ ಸೂಳೆಯೆಂಜಲು ತಿಂಬರಯ್ಯಾ. ಮಾಂಸವ ಮಚ್ಚಿದವರೆಲ್ಲ ಸೊಣಗನೆಂಜಲ ತಿಂಬರಯ್ಯಾ. ಕೂಡಲಸಂಗನ ಶರಣರ ಒಕ್ಕುಮಿಕ್ಕುದ ಲಿಂಗಕ್ಕೆ ಕೊಟ್ಟುಕೊಂಡು ಯೋಗ್ಯವಾದವರ ನಮ್ಮ ಚೆನ್ನಬಸವಣ್ಣ ಬಲ್ಲ.