ಬಸವಣ್ಣ   
  ವಚನ - 1026     
 
ಅಷ್ಟವಿಧಾರ್ಚನೆ ಅರಸರಿಯದ ಬಿಟ್ಟಿ ಕಾಣಿರೇ, ಸಗುಣ ನಿರ್ಗುಣ ಸ್ಥೂಲ ಸೂಕ್ಷ್ಮ, ಅವು ನಿಜವನರಿವವೆ? ಅವು ತಮ್ಮ ತಾವರಿಯವು. ಅವ ಭಿನ್ನವೆಂದರಸಲುಂಟೆ? ಕೂಡಲಸಂಗಮದೇವಾ.