ಬಸವಣ್ಣ   
  ವಚನ - 1030     
 
ಅಹುದಹುದು; ಕೆರೆಯ ತಪ್ಪಿ ಬಾವಿಯ ಬಿದ್ದಂತೆ, ಮುಳ್ಳ ಕಳೆದು ದಸಿಯ ಬೆಟ್ಟಿದಂತೆ, ಬದುಕಿದ ಹಕ್ಕಿಯ ಕಿಚ್ಚಿನೊಳಗಿಕ್ಕುವರೆ, ಕೂಡಲಸಂಗಮದೇವಾ ?