ಬಸವಣ್ಣ   
  ವಚನ - 1032     
 
ಅಳಿವನಲ್ಲ, ಉಳಿವನಲ್ಲ, ಪ್ರಳಯವೆಂಬುದ ಮುನ್ನರಿಯನು, ಕಳಾಕುಳರಹಿತನು, ಉಭಯಕುಳರಹಿತನು, ಅರಿವ ಬೈಚಿಟ್ಟು ಮೆರೆವ ಗಮನನಲ್ಲ. ಕೂಡಲಸಂಗಯ್ಯನೆಂಬ ಶಬ್ದಮುಗ್ಧನ ಭಾವದ ಬಳಕೆಯಲ್ಲಿ ಗೆಲಬಹುದೆ ಹೇಳಾ?