ಬಸವಣ್ಣ   
  ವಚನ - 1035     
 
ಆಚಾರವನಾಚಾರವಾಯಿತ್ತು, ಸೀಮೆ ನಿಸ್ಸೀಮೆಯಾಯಿತ್ತು, ಪ್ರಾಣಸಂಚ ತಪ್ಪಿ ಲಿಂಗಸಂಚವಾಯಿತ್ತು, ಎಲ್ಲಿ ಶಬ್ದವಲ್ಲಿಯೆ ಲಿಂಗಸ್ವಾಯತವಾಯಿತ್ತು, ಎಲ್ಲಿ ಸೋಂಕು ಅಲ್ಲಿಯೆ ಲಿಂಗಸ್ವಾಯತವಾಯಿತ್ತು, ಎಲ್ಲಿ ರೂಪವಲ್ಲಿಯೆ ಲಿಂಗಸ್ವಾಯತವಾಯಿತ್ತು, ಎಲ್ಲಿ ರುಚಿಯಲ್ಲಿಯೆ ಲಿಂಗಸ್ವಾಯತವಾಯಿತ್ತು, ಎಲ್ಲಿ ಗಂಧವಲ್ಲಿಯೆ ಲಿಂಗಸ್ವಾಯತವಾಯಿತ್ತು, ಕೂಡಲಸಂಗಮದೇವರ ಕರುಣರಸಾಬ್ದಿ ಕಡೆಗೋಡಿವರಿಯಿತ್ತಯ್ಯಾ, ಎನ್ನ ಮೇಲೆ.