ಬಸವಣ್ಣ   
  ವಚನ - 1050     
 
ಆನು ಭಕ್ತನಲ್ಲ, ಆನು ಯುಕ್ತನಲ್ಲ, ನೀವು ಮಾಡಿದ ಸೂತ್ರದ ಬೊಂಬೆ ನಾನಯ್ಯ. ಎನಗೆ ಬೇರೆ ಸ್ವತಂತ್ರವುಂಟೆ? ನೀವೆನ್ನ ಮಾನಾಭಿಮಾನಕ್ಕೊಡೆಯರಾದ ಬಳಿಕ ಎನ್ನ ತಪ್ಪ ಲೆಕ್ಕಿಸದೆ ಬಿಜಯಂಗೈವುದಯ್ಯಾ, ಕೂಡಲಸಂಗಮದೇವಾ.