ಬಸವಣ್ಣ   
  ವಚನ - 1052     
 
ಆನೆತ್ತ ಬಲ್ಲೆನಯ್ಯಾ ನಿಮ್ಮ ಭಕ್ತಿಯ ಘನವ? ಆನೆತ್ತ ಬಲ್ಲೆನಯ್ಯಾ ನಿಮ್ಮ ಶ್ರೀಪಾದವ ನಿಲವ? ಕಾಯದ ಕಳವಳದ ಮರೆಯಲಿದ್ದವರಲ್ಲಿ ನಂಬುಗೆಯಳವಡುವುದೆ? ಕೂಡಲಸಂಗಮದೇವಾ, ಎನ್ನವಗುಣವ ನೋಡದೆ ಕರುಣದಿಂದ ಭಕ್ತಿಯ ನಿಲವ ತೋರಾ ತಂದೆ.