ಬಸವಣ್ಣ   
  ವಚನ - 1055     
 
ಆರಾರ ಮನೆಗೆ ಹೋದಡೆ ಸಾರೆನ್ನರು, ಸರಕುಮಾಡರು, ಆರ ಸಾರುವೆನಯ್ಯಾ? ಆರ ಹೊದ್ದುವೆನಯ್ಯಾ? ಭಕ್ತಿಯಿಲ್ಲ-ಬಡವನೆಂದು ಒಡನೆ ನುಡಿಯರು, ಆರ ಸಾರುವೆನಯ್ಯಾ? ಕಾರುಣ್ಯಮೂರ್ತಿ, ನೀನಲ್ಲದೆ ಇನ್ನಾರ ಸಾರುವೆನಯ್ಯಾ, ಕೂಡಲಸಂಗಯ್ಯಾ?