ಬಸವಣ್ಣ   
  ವಚನ - 1059     
 
ಇದ್ದ ಪರಿ ಇಂತುಟಿದೆ ನೋಡಯ್ಯಾ; ನಿಂದಡೆ ನೆಳಲಿಲ್ಲ, ನಡೆದಡೆ ಹೆಜ್ಜೆಯಿಲ್ಲ, ಭೂತಳದೊಳಗೆ ಕಂಡುದಿಲ್ಲ. ಇಂತಪ್ಪ ಅನಿಯಮದ ಸುಳುಹು, ಅಹುದಹುದು, ಅರಿದರಿದು ಜಂಗಮಸ್ಥಲ ಇಂತುಟಲ್ಲದೆ, ಎಂತುಟು ಹೇಳಾ? ಆಪ್ಯಾಯನದ ಅರಿಕೆಯ ಹೊಲಬ ಕಾಣಬಾರದು, ಊಡಿಸಿದಡೆ ಉಂಬನೊ ಉಣ್ಣನೊ? ಉಂಬಂಥವರಾದಡೆ ನೀಡುವೆ ಕೂಡಲಸಂಗಮದೇವರಿಗೆ ಚೆನ್ನಬಸವಣ್ಣಾ, ನೀನಹುದಹುದೆನಲಿಕೆ.