ಬಸವಣ್ಣ   
  ವಚನ - 1070     
 
ಊರ ಮಾರಿಯ ಮೂಗ ಕೊಯ್ವೆ, ಆಲದ ಬ್ರಹ್ಮನ ಹಲ್ಲ ಕಳೆವೆ, ಅಂತರದವ ನಮ್ಮ ಲೆಂಕ ನೋಡಾ, ಆಕಾಶದವ ನಮ್ಮಾಳು ನೋಡಾ. ಎಮಗೆ ಕೂಡಲಸಂಗಯ್ಯನುಂಟು, ಕಟ್ಟು, ಜವನೆಂಬ ತರುವಲಿಗೊರೆಯ.