ಬಸವಣ್ಣ   
  ವಚನ - 1077     
 
ಎನ್ನಂಗದ ಜಂಗಮವೆ ಲಿಂಗವ ದಿಟಮಾಡಲರಿಯೆನು, ಜಂಗಮವೆ ಲಿಂಗವೆಂಬ ಮಾತೆನಗೆ ಕಷ್ಟ. ಕಲಹ ಕಡುಗೋಪಿ ನಾನಯ್ಯಾ, ದುರಾಚಾರಿ ನಾನು, ಎನಗೆ ಕರುಣಿಸು ಕೂಡಲಸಂಗಮದೇವಾ.