ಬಸವಣ್ಣ   
  ವಚನ - 1092     
 
ಎನ್ನನುಭಾವದ ಗಮ್ಯವೆ, ಎನ್ನರುಹಿನ ವಿಶ್ರಾಮವೆ, ಎನ್ನ ಭಾವದ ಬಯಕೆಯೆ, ಎನ್ನ ನಿಜದ ನಿಲವೆ, ಎನ್ನ ಪರಿಣಾಮದ ಮೇರುವೆ, ಎನ್ನ ಘನದ ನಿಲವೆ, ನಿಮ್ಮ ಸುಳುಹು ಎತ್ತಲಡಗಿತ್ತೋ? ನಿಮ್ಮ ನಾಮ ನಿರ್ನಾಮವಾಯಿತ್ತೆ ಎಲೆ ಪರಮಗುರುವೆ ಕೂಡಲಸಂಗಯ್ಯನಲ್ಲಿ ಉರಿಯುಂಡ ಕರ್ಪುರದಂತಾದೆಯಲ್ಲಾ, ಪ್ರಭುವೆ